You are currently viewing Precautionary instructions for New year 2025 celebration.

Precautionary instructions for New year 2025 celebration.

:: ಬಳ್ಳಾರಿ ಜಿಲ್ಲಾ ಪೊಲೀಸ್ ::

:: ಪತ್ರಿಕಾ ಪ್ರಕಟಣೆ ::

ಹೊಸ ವರ್ಷದ ಸಂಭ್ರಮಾಚರಣೆಗೆ ಈ ಕೆಳಕಂಡ ಮುಂಜಾಗ್ರತಾ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಿದೆ.

1) ದಿನದ 24*7 ರೀತಿಯಲ್ಲಿ ಪೆಟ್ರೋಲಿಂಗ್ ಕುರಿತು ಸಮವಸ್ತ್ರದಲ್ಲಿ ಇರುವ ಸಿಬ್ಬಂದಿಯವರನ್ನು ನೇಮಕ ಮಾಡಿ ಪಿ.ಎಸ್.ಐ. ದರ್ಜೆಯ ಅಧಿಕಾರಿಯನ್ನು ಪೆಟ್ರೋಲಿಂಗ್ ಚೆಕ್ಕಿಂಗ್ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.

2) ಡಾಬಾ ಮತ್ತು ರೆಸ್ಟೋರೆಂಟ್ಗಗಳಲ್ಲಿ ಗಾಂಜಾ ಮತ್ತು ಇತರೆ ಮಾದಕ ದ್ರವ್ಯಗಳು ಹಾಗೂ ಅಕ್ರಮ ಮಧ್ಯ ಮಾರಾಟ ಇತ್ಯಾದಿ ಕಂಡುಬಂದಲ್ಲಿ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು.

3) ಹೊಸ ವರ್ಷದ ಆಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಇರುವುದಿಲ್ಲ.

4) ಎಲ್ಲಾ ಸೂಕ್ಷ್ಮಸ್ಥಳಗಳಲ್ಲಿ ಪಬ್ಲಿಕ್ ಸೇಫ್ಟಿ ಯಾಕ್ಟ್ ರನ್ವಯ ಸಿ.ಸಿ. ಟಿವಿಗಳನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳುವುದು.

5) ಮದ್ಯದಂಗಡಿ/ಬಾರ್/ರೆಸ್ಟೋರೆಂಟ್/ ಹೋಟೆಲ್ ಮಾಲೀಕರಿಗೆ ಅವಶ್ಯಕವಾದ ಸೂಚನೆಗಳನ್ನು ನೀಡಲಾಗಿದೆ.

6) ಮದ್ಯ ಸೇವಿಸಿ ವಾಹನ ಚಾಲನೆ, ವೀಲಿಂಗ್ ಮಾಡುವುದು ಮತ್ತು ದ್ವಿ-ಚಕ್ರವಾಹನಗಳಲ್ಲಿ 3-4 ಜನರು ಓಡಾಡುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.

7) ಫೈಓವರ್‌ಗಳ ಮೇಲೆ ಮೋಜು ಮಸ್ತಿಮಾಡುವುದನ್ನು ತಡೆಗಟ್ಟಲು ಬ್ಯಾರಿಕೇಡ್‌ಗಳನ್ನು ಅಳವಡಿಸುವುದರಿಂದ, ಪರ್ಯಾಯ ರಸ್ತೆ ಬಳಸುವುದು.

8) ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರ, ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರ, ಮುಖ್ಯವಾದ ಚರ್ಚ, ದೇವಸ್ಥಾನ, ಮಸೀದಿ, ಜೈನ ಮಂದಿರ ಹಾಗೂ ಇತರೆ ಪ್ರಾರ್ಥನಾ ಸ್ಥಳಗಳ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಇರುವುದರಿಂದ ಸಂಭ್ರಮಾಚರಣೆಗೆ ಈ ಸ್ಥಳಗಳಲ್ಲಿ ಅವಕಾಶವಿರುವುದಿಲ್ಲ.

9) ಬಸ್‌ನಿಲ್ದಾಣ, ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗೆ ಅವಕಾಶವಿರುವುದಿಲ್ಲ.

10) ಹೊಸವರ್ಷ ಆಚರಣೆಯ ಸಂದರ್ಭದಲ್ಲಿ ರಸ್ತೆ ಮೇಲೆ ಕೆಕ್ ಕಟ್ ಮಾಡುವುದು, ಸಾರ್ವಜನಿಕ ಪ್ರದೇಶ, ರಸ್ತೆ ಮೇಲೆ ಮಧ್ಯಪಾನ ಸೇವಿಸುವುದಕ್ಕೆ ಅವಕಾಶವಿರುವುದಿಲ್ಲ.

ಪೊಲೀಸ್ ಅಧೀಕ್ಷಕರು, ಬಳ್ಳಾರಿ.

Leave a Reply